ಬಹಿರಂಗ ಅಸ್ಪೃಶ್ಯತೆ ಆಚರಣೆ: ಕ್ರಮಕ್ಕೆ ಆಗ್ರಹಿಸಿ ಡಿ.ಎಸ್.ಎಸ್ ನೇತೃತ್ವದಲ್ಲಿ ಪ್ರತಿಭಟನೆ

ದಲಿಸ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ಬಹುಜನ ಸಮಾಜ ಪಕ್ಷದ ಶಂಕರ್, ಜಾಲಪ್ಪ ನಾಯಕ್, ಪ್ರೊ.ಮಹೇಶ್ ಚಂದ್ರ ಗುರು, ಸೋಮಯ್ಯ ಮಲಿಯೂರ್, ಮಾದೇವ ಭರಣಿ, ಕುಮಾರ್ ಸ್ವಾಮಿ, SDPI ನ ಅಜತ್ ಖಾನ್, ದಲಿತ ಬಹುಜನ ಚಳವಳಿಯ ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸದ್ದರು.

| ನಾನುಗೌರಿ ಡೆಸ್ಕ್ |

ಗುಂಡ್ಲುಪೇಟೆಯ ದಲಿತ ಯುವಕನರ ಬೆತ್ತಲೆ ಮೆರವಣಿಗೆ ಮೂಲಕ ಬಹಿರಂಗ ಅಸ್ಪೃಶ್ಯತೆ ಆಚರಣೆ ಮಾಡಿದ್ದ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಇಂದು ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನೂರಾರು ಮಾನವ ಪ್ರೇಮಿಗಳು ಪಾಲ್ಗೊಂಡು ಜಿಲ್ಲಾಡಳಿತದ ವಿರುದ್ಧ ಮತ್ತು ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಟೌನ್ ಹಾಲ್ ಮುಂದೆ ನಡೆದ ಪ್ರತಿಭಟನೆಯಲ್ಲಿ ಸಂತ್ರಸ್ತ ಯುವಕನಿಗೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ತಪ್ಪತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು, ಇಂತಹ ಅಮಾನವೀಯ ಘಟನೆಗಳು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮರಕಳಿಸಬಾರದು ಎಂಬ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಯಿತು.

ದೇಶದಲ್ಲಿ ದಲಿತರನ್ನು ಮತ್ತಷ್ಟು ದುರ್ಬಲಗೊಳಿಸಲು ಮೀಸಲಾತಿಯನ್ನು ತೆಗೆಯಲು ಪ್ರಯತ್ನಿಸಲಾಗುತ್ತಿದೆ. ಬಡ್ತಿ ಮೀಸಲಾತಿಗೆ ನೂರಾರು ಅಡ್ಡಿಗಳನ್ನು ಒಡ್ಡಲಾಗುತ್ತಿದೆ. ದಲಿತ ದೌರ್ಜನ್ಯ ಕಾಯ್ದೆಯ ಹಲ್ಲು ಕೀಳುವ ಹುನ್ನಾರ ನಡೆಯುತ್ತಿದೆ, ಸಾಲದು ಎಂಬಂತೆ ಬೆತ್ತಲು ಮಾಡಿ ದೌರ್ಜನ್ಯವೆಸಗುವ ಕ್ರೂರ ಘಟನೆಗಳನ್ನು ನಡೆಯುತ್ತಿರುವುದನ್ನು ಸಹಿಸಲಾಗುವುದಿಲ್ಲ. ಪ್ರತಾಪ ದಲಿತನಾದ ಕಾರಣಕ್ಕೆ ಆತನನ್ನು ಬೆತ್ತಲು ಮಾಡಿ ಅವಮಾನ ಮಾಡಲಾಗಿದೆ. ಬೇರೆ ಸವರ್ಣಿಯ ಜಾತಿಯವರಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಹೊಡೆದು ಬಡಿಯುವುದಕ್ಕಿಂತ ರೀತಿ ಬೆತ್ತಲು ಮಾಡುವುದು ಅಮಾನವೀಯ. ಮೈಮೇಲೆ ಆಗುವ ಗಾಯಕ್ಕಿಂತ ಇದು ಮನಸ್ಸಿನ ಮೇಲಾಗುವ ಗಾಯವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಒಗ್ಗಾಟ್ಟಾಗಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸೋಣ ಎಂದು ಹಿರಿಯ ಹೋರಾಟಗಾರರಾದ ಸಿರಿಮನೆ ನಾಗರಾಜ್ ಕಿಡಿಕಾರಿದರು.

ಇಂದು ದೇಶಾದ್ಯಂತ ದಲಿತ ದಮನಿತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಂಘಪರಿವಾರ ಕುಮ್ಮಕ್ಕು ಕೊಡುತ್ತಿದೆ. ದಲಿತರು, ಮುಸ್ಲಿಮರು, ಮಹಿಳೆಯರ ಮೇಲೆ ಎಗ್ಗಿಲ್ಲದೇ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಸಂದರ್ಭದಲ್ಲಿ ನಾವು ಒಗ್ಗಟ್ಟಾಗುವ ಅನಿರ್ವಾಯತೆ ಹೆಚ್ಚಾಗಿದ್ದು ಆ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕಬೇಕು ಎಂದರು.

ವಿಡಿಯೋ ನೋಡಿ 

ದಲಿತ ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ಗೌರಿಯವರ ಮಾತುಗಳು.ದಿನಾಂಕ ೨ರಂದು ಗುಂಡ್ಲುಪೇಟೆಯಲ್ಲಿ ದಲಿತ ಯುವಕ ಪ್ರತಾಪ್ ನನ್ನು ಬೆತ್ತಲೆ…

Naanu Gauri यांनी वर पोस्ट केले बुधवार, १२ जून, २०१९

ಕರ್ನಾಟಕ ಜನಶಕ್ತಿಯ ಗೌರಿಯವರು ಮಾತನಾಡಿ ಇದೇ ಮಾದರಿಯಲ್ಲಿ ತುಮಕೂರಿನ ಗುಬ್ಬಿಯಲ್ಲಿಯೂ ದಲಿತ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಆಗ ಪ್ರಗತಿಪರರೆಲ್ಲರೂ ಸೇರಿ ‘ಚಲೋ ತುಮಕೂರು’ ಎಂಬ ದೊಡ್ಡ ಹೋರಾಟ ಮಾಡಿದ್ದೆವು. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ನಾಗರೀಕ ಸಮಾಜ ಏನು ಮಾಡುತ್ತಿದೆ? ಇದು ಅವರೆಲ್ಲರೂ ತಲೆತಗ್ಗಿಸಬೇಕಾದ ವಿಚಾರವಾಗಿದೆ. ಈ ಘಟನೆಯನ್ನು ತಡೆಯಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಜೂನ್ 15ರ ಶನಿವಾರದಂದು  ಬೆಂಗಳೂರಿನಲ್ಲಿಯೂ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ವಿದ್ಯಾವಂತ ಯುವಕನಿಗೆ ಈ ಪರಿಸ್ಥಿತಿ ಎದುರಾದರೆ ಇನ್ನು ಓದದ ದಲಿತ ಯುವಕರು, ಹೆಣ್ಣು ಮಕ್ಕಳ ಕಥೆಯೇನು? ಹಾಗಾಗಿ ನಾವು ಈಗಲೇ ಸರ್ಕಾರವನ್ನು ಎಚ್ಚರಿಸಬೇಕಿದೆ. ಹಾಗಾಗಿ ನಮ್ಮ ಸ್ವಾಭಿಮಾನಿ ಉಳಿಸಿಕೊಳ್ಳಲು ದಿಟ್ಟ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ದಲಿಸ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ಬಹುಜನ ಸಮಾಜ ಪಕ್ಷದ ಶಂಕರ್, ಜಾಲಪ್ಪ ನಾಯಕ್, ಪ್ರೊ.ಮಹೇಶ್ ಚಂದ್ರ ಗುರು, ಸೋಮಯ್ಯ ಮಲಿಯೂರ್, ಮಾದೇವ ಭರಣಿ, ಕುಮಾರ್ ಸ್ವಾಮಿ, SDPI ನ ಅಜತ್ ಖಾನ್, ದಲಿತ ಬಹುಜನ ಚಳವಳಿಯ ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸದ್ದರು. ನೂರಾರು ಜನ ಪ್ರಜ್ಞಾವಂತರು ಭಾಗವಹಿಸಿದ್ದರು.

ಇದನ್ನು ಓದಿ: ಗುಂಡ್ಲುಪೇಟೆಯ ಯುವಕನ ಬೆತ್ತಲೆ ಮೆರವಣಿಗೆ: ಅಮಾನವೀಯ ಘಟನೆಗೆ ಖಂಡನೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here