Homeರಂಜನೆಪರದೆಯ ಮೇಲೆ ವರ್ಲ್ಡ್ ವಾರ್

ಪರದೆಯ ಮೇಲೆ ವರ್ಲ್ಡ್ ವಾರ್

- Advertisement -
- Advertisement -

ಸೋಮಶೇಖರ್ ಚಲ್ಯ |

1914-1918ರ ಒಂದನೇ ಮಹಾಯುದ್ಧ ಜಗತ್ತನ್ನೇ ರಣರಂಗವಾಗಿಸಿ ಬಾಂಬುಗಳ ಧೂಳಿನಲ್ಲಿ ಹೋಕುಳಿಯಾಡಿತ್ತು. ಕೇವಲ ಒಂದು ರಾಜ್ಯ ಅಥವಾ ದೇಶವಲ್ಲದೆ ಇಡೀ ಜಗತ್ತೇ ಬಂದೂಕು ಹಿಡಿದು ನಿಂತಿತ್ತು. ಈ ಮಹಾಯುದ್ಧದಲ್ಲಿ ಭಾರತೀಯ ಸೈನಿಕರೂ ಸೇರಿದಂತೆ ಲಕ್ಷಾಂತರ ಸೈನಿಕರು ಪ್ರಾಣತೆತ್ತಿದ್ದರು. ಈ ಸೈನಿಕರ ನಡುವೆ ಸಿಡಿದೆದ್ದು ಘರ್ಜಿಸಿದ್ದ ಭಾರತದ 19 ವರ್ಷದ ಗಬ್ಬರ್ ಸಿಂಗ್ ನೇಗಿಯ ಹೆಸರು ಇತಿಹಾಸದ ಪುಟದಲ್ಲಿ ಯಾರ ಕಣ್ಣಿಗೂ ಕಾಣಸಿಲ್ಲ. ನೇಗಿಯಂತಹ ಹುತಾತ್ಮನ ಕಥೆಯನ್ನು ತೆರೆಮೇಲೆ ತರಲು ಟೊಂಕ ಕಟ್ಟಿದ್ದಾರೆ ಮಾಜಿ ಎನ್.ಎಸ್.ಜಿ ಕಮಾಂಡೋ ಲಕ್ಷ್ಮಣ್ ಸಿಂಗ್ ಬಿಷ್ಟ್. ಈಗಾಗಲೇ ಆರ್ಮಿ, ಸೈನಿಕರ ಬಗೆಗೆ ಹಲವಾರು ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಆದರೆ ಯುದ್ಧದಲ್ಲಿ ಮಡಿದ ಯೋಧನ ಚಿತ್ರವನ್ನು ಮತ್ತೊಬ್ಬ ಯೋಧ ತೆರೆಮೇಲೆ ತರಲು ಸಜ್ಜಾಗಿರುವುದು ವಿಶೇಷ. ಉತ್ತರಾಖಂಡ್ ರಾಜ್ಯದ ತೆಹ್ರಿ ಘರ್ವಾಲ್ ಜಿಲ್ಲೆಯಲ್ಲಿ 1895ರ ಏಪ್ರಿಲ್ 21ರಲ್ಲಿ ಜನಿಸಿದ ಗಬ್ಬರ್ ಸಿಂಗ್ ನೇಗಿ ತನ್ನ ಹರೆಯದ 17ನೇ ವಯಸ್ಸಿಗೆ 1913ರಲ್ಲಿ ಬ್ರಿಟಿಷ್ ಸೇನೆ ಸೇರಿದ್ದ. ಘರ್ವಾಲ್ ರೈಫಲ್ಸ್ನ ನೇತೃತ್ವ ವಹಿಸಿದ್ದ ನೇಗಿಯ ವೀರೋಚಿತ ಸೇವೆಗೆ ನೇಗಿಯ ಮರಣದ ನಂತರ ಬ್ರಿಟಿಷರ ಅತ್ಯುನ್ನತ ಪ್ರಶಸ್ತಿ `ವಿಕ್ಟೋರಿಯಾ ಕ್ರಾಸ್’ ಪ್ರಶಸ್ತಿಯನ್ನು ನೀಡಲಾಗಿತ್ತು. ಇಂತಹ ಚಿಕ್ಕವಯಸ್ಸಿನ ದೊಡ್ಡ ಸಾಧಕನ ಜೀವನವನ್ನು ತೆರೆಯ ಮೇಲೆ ತರುತ್ತಿರುವ ಲಕ್ಷ್ಮಣ್ ಸಿಂಗ್ ಮೊದಲ ಮಹಾಯುದ್ಧವನ್ನು ಕಣ್ಣೆದುರಿಗಿಡಲು ರೆಡಿಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...