ನಾನು ಗೌರಿ ಪೋಲ್, ವಿಕೃತರಿಗೆ ಸೋಲು : ಸಾವನ್ನು ಸಂಭ್ರಮಿಸುವುದು ತಪ್ಪೆಂದವರು 70%, ಸರಿಯೆಂದವರು 30%

| ನಾನುಗೌರಿ ಡೆಸ್ಕ್ |

ಕನ್ನಡದ ಮೇರು ಲೇಖಕ, ನಾಟಕಕಾರ, ಜೀವಪರ ಹೋರಾಟಗಾರ ಗಿರೀಶ್ ಕಾರ್ನಾಡ್‍ರವರ ನಿಧನದ ನಂತರ ಲಕ್ಷಾಂತರ ಜನ ಕಂಬನಿ ಮಿಡಿದಿದ್ದರು. ಚಳವಳಿ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದ್ದರು. ನೋವಿನ ಭಾವಪೂರ್ಣ ವಿದಾಯವನ್ನು ಸಲ್ಲಿಸಿದ್ದರು. ಜೊತೆಗೇನೆ ಹಲವು ವಿಕೃತ ಮನಸ್ಸಿನವರು, ಒಂದು ಪಕ್ಷಕ್ಕೆ ಸೇರಿದವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾವನ್ನು ಸಂಭ್ರಮಿಸಿ ಪೋಸ್ಟ್ ಸಹ ಹಾಕಿದ್ದರು. ಇದರ ಕುರಿತಾಗಿ ಸಾಕಷ್ಟು ಸುದ್ದಿಯಾಗಿತ್ತು.

ಇದರಿಂದ ನಾನುಗೌರಿ.ಕಾಂ ವತಿಯಿಂದ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳು ನಾನುಗೌರಿ ಫೇಸ್‍ಬುಕ್ ಪುಟದಲ್ಲಿ ಒಂದು ಪೋಲ್ ಕ್ರಿಯೇಟ್ ಮಾಡಲಾಗಿತ್ತು. “ಸಾವನ್ನು ಸಂಭ್ರಮಿಸುವುದು ಭಾರತೀಯ ಸಂಸ್ಕøತಿಯೇ? ವೋಟ್ ಮಾಡಿ, ಕಾಮೆಂಟ್ ಮಾಡಿ. ಷೇರ್ ಸಹ ಮಾಡಬಹುದು” ಎಂದು ಪೋಲ್ ನಲ್ಲಿ ಬರೆದು 1. ಹೌದು 2. ಖಂಡಿತಾ ಅಲ್ಲ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿತ್ತು.

ಸಾವನ್ನು ಸಂಭ್ರಮಿಸುವುದು ಭಾರತೀಯ ಸಂಸ್ಕೃತಿಯೇ? ವೋಟ್ ಮಾಡಿ, ಕಾಮೆಂಟ್ ಮಾಡಿ. ಷೇರ್ ಸಹಾ ಮಾಡಬಹುದು.

Naanu Gauri यांनी वर पोस्ट केले सोमवार, १० जून, २०१९

ಪೋಲ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ನೂರಾರು ಜನ ಓಟ್ ಮಾಡಿ ಖಂಡಿತಾ ಅಲ್ಲ ಎಂಬುದಕ್ಕೆ ಮತ ಹಾಕಿದ್ದರು. ಅಷ್ಟರಲ್ಲಿ ಕ್ರಿಸ್ಟೋಫರ್ ಚಕ್ರವರ್ತಿ ಹೆಸರಿನ ಮೋದಿಯವರು ಫ್ರೊಫೈಲ್ ಹಾಕಿದ್ದ ಫೇಕ್ ಅಕೌಂಟ್‍ನಿಂದ ಒಬ್ಬರು “ನೀವ್ಯಾರು ಈ ಜನ್ಮದಲ್ಲಿ ಪೋಲ್ ಗೆಲ್ಲೋಕೆ ಆಗೋದಿಲ್ಲ.. ಕಿಲ ಕಿಲ,,, ನಾವ್ ಬಿಡಕಿಲ್ಲ ಎಂದು ಕಮೆಂಟ್” ಮಾಡಿದರು. ಅಷ್ಟು ಮಾತ್ರವಲ್ಲದೇ ಪೋಲ್‍ನ ಲಿಂಕ್ ಕಾಪಿ ಮಾಡಿ ಬಲಪಂಥೀಯ ಗ್ರೂಪುಗಳಲ್ಲಿ ಷೇರ್ ಮಾಡಿ ಬಂದು ಇಲ್ಲಿ ವೋಟ್ ಮತ್ತು ಕಮೆಂಟ್ ಮಾಡುವಂತೆ ಮಾಡಿದರು. ಆಗ ಪೋಲ್ ನಲ್ಲಿ 76%ಜನ ಸಾವಿನ ಸಂಭ್ರಮ ಖಂಡಿತ ತಪ್ಪೆಂದರೆ 24% ಜನ ಸರಿ ಎಂದು ಸಮರ್ಥಿಸಿಕೊಂಡಿದ್ದರು.

ಪೋಲ್ ಡಿಲೀಟ್ ಮಾಡಿದ್ರೆ ಕಾರ್ನಾಡ್ ಪ್ರೇತಾತ್ಮನಾಗಿ ನಿನ್ನ ಮನೇಲಿ ಅಲಿತಾನೇ ಹುಷಾರ್ ಎಂದು ಕಮೆಂಟ್ ಮಾಡಿದರು. ಬೆಳಿಗ್ಗೆ ಒಳಗೆ ಈ ಪೋಲ್ ಉಡೀಸ್ ಮಾಡ್ತೀವಿ ನೋಡಿ ಎಂದು ಚಾಲೆಂಜ್ ಸಹ ಹಾಕಿದರು. ಅಂದರೆ ಅವರ ಕಡೆಯವರೆಲ್ಲಾ ಬಂದು ಸಾವನ್ನು ಸಂಭ್ರಮಿಸುವುದು ಸರಿ ಎಂದು ಕಮೆಂಟ್ ಮತ್ತು ವೋಟ್ ಮಾಡುತ್ತಾರೆ ಎಂಬ ಅತೀ ಆತ್ಮವಿಶ್ವಾಸ ಅವರದು. ಅದಾದ ಸ್ವಲ್ಪ ಹೊತ್ತಿನಲ್ಲೇ ನೂರಾರು ಜನ ಬಲಪಂಥೀಯರು ಪೋಲ್‍ಗೆ ಲಗ್ಗೆ ಇಟ್ಟರು. ವೋಟ್ ಮಾಡಿ ಕೆಟ್ಟ ಕೊಳಕಾಗಿ, ಅಶ್ಲೀಲವಾಗಿ ಬೈಗುಳಗಳ ಮಳೆ ಸುರಿಸಿದರು.

ಅಷ್ಟು ಮಾತ್ರವಲ್ಲದೇ ತಮ್ಮ ಯಾವು ಯಾವುದೋ ಫೇಸ್‍ಬುಕ್ ಪೇಜ್‍ನಲ್ಲಿ, ಗ್ರೂಪ್‍ನಲ್ಲಿ ಮತ್ತು ವಾಟ್ಸಾಪ್ ಗುಂಪುಗಳಿಗೆ ಪೋಲ್‍ನ ಲಿಂಕ್ ಹಾಕಿ ಬಂದು ವೋಟ್ ಮಾಡಲು ಮತ್ತು ಕೆಟ್ಟದಾಗಿ ಕಮೆಂಟ್ ಮಾಡಲು ಕರೆ ನೀಡಿದ್ದರು. ಆದರೆ ಒಂದು ದಿನದ ಪೋಲ್ ಮುಗಿದಾಗ ಅವರ ಬಯಕೆ ಸ್ವಲ್ಪ ಮಾತ್ರವೇ ಈಡೇರಿತ್ತು. ಅಂಕಿ ಸಂಖ್ಯೆಗಳ ಆಧಾರದಲ್ಲಿ ಅವರಿಗೆ ನಿಚ್ಚಳ ಸೋಲಾಗಿತ್ತು. ಪೋಲ್ ನಲ್ಲಿ 14810ಜನ ಒಟ್ಟು ವೋಟ್ ಮಾಡಿದ್ದು 70%ಜನ ಸಾವಿನ ಸಂಭ್ರಮ ಖಂಡಿತ ತಪ್ಪೆಂದರೆ 30% ಜನ ಮಾತ್ರ ಸರಿ ಎಂದು ಸಮರ್ಥಿಸಿಕೊಂಡಿದ್ದರು.

ಅಂದರೆ ಇಂದಿಗೂ 70% ಅಂದರೆ ಪೋಲ್ ಪ್ರಕಾರ 10367 ಜನ ಸಾವಿನ ಸಂಭ್ರಮವನ್ನು ವಿರೋಧಿಸಿ ಜೀವಪರತೆ ಮೆರೆದಿದ್ದಾರೆ. ಇದು ಭರವಸೆಯ ಸಂಗತಿ. ಈ ಸಮಾಜವನ್ನು ಒಂದಷ್ಟು ಸಹನೀಯಗೊಳಿಸಬಹುದೆಂಬ ಆಶಯಕ್ಕೆ ಇದು ವಿಶ್ವಾಸ ಕೊಡುವ ಸಂಗತಿಯಾಗುತ್ತದೆ. ಅಂದರೆ ಸಜ್ಜನರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿಯೇ ಇದ್ದಾರೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಹೊಸದೊಂದನ್ನು ಕಟ್ಟುವ, ಮಾನವೀಯತೆಯನ್ನು, ಬಹುತ್ವವನ್ನು ಕಾಪಾಡಬೇಕೆಂದು ಶ್ರಮಿಸುವವರಿಗೆ ಇದು ಆಶಾದಾಯಕ ಸಂಗತಿ.

ಆದರೆ ಎಚ್ಚರಿಕೆಯ ಸಂಗತಿಯೆಂದರೆ 30%ಜನ ವೋಟ್ ಮಾಡಿರುವ 4443 ಜನ ಸಾವನ್ನು ಸಂಭ್ರಮಿಸಿದ್ದಾರೆ, ವಿಕೃತತೆ ಮೆರೆದಿದ್ದಾರೆ. ಕೆಟ್ಟದಾಗಿ ಬೈಯ್ಯುವ ಮನಸ್ಥಿತಿ ರೂಢಿಸಿಕೊಂಡಿದ್ದಾರೆ. ಇದು ಸಹ ಕಡಿಮೆ ಸಂಖ್ಯೆಯೇನಲ್ಲ. ಇವರು ಹೀಗೇಕಾದರೂ ಎಂಬುದರ ಕುರಿತು ಯೋಚಿಸಬೇಕಿದೆ. ಏಕೆಂದರೆ ಯಾವ ಧರ್ಮವೂ ಸಹ ಸಾವನ್ನು ಸಂಭ್ರಮಿಸು ಎಂದು ಹೇಳಿಕೊಡುವುದಿಲ್ಲವಲ್ಲ?

ಈ ಪೋಲ್ ನಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಒಟ್ಟು 259 ಜನ ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಸಾವನ್ನು ಸಂಭ್ರಮಿಸುವುದು ಸರಿಯಲ್ಲ ಎಂಬ ಕಾಳಜಿ ತೋರಿಸಿದ್ದಾರೆ. ಇನ್ನುಳಿದಂತೆ ಎಲ್ಲವೂ ಬಲಪಂಥೀಯರ ಕಮೆಂಟ್ ಗಳೇ ಆಗಿದ್ದು ತೀರಾ ಕೊಳಕು ಭಾಷೆಯನ್ನು ಪ್ರಯೋಗಿಸಿ ಹೀಗಳೆದಿದ್ದಾರೆ. ಇದು ಹೇಗೆ ಸಾಧ್ಯ? ವೋಟ್ ಮಾಡಿರುವವರು 70%ಜನ ಸಾವಿನ ಸಂಭ್ರಮ ಸರಿಯಲ್ಲ ಎಂದರೆ ಕಮೆಂಟ್ ಮಾಡಿರುವ 90%ಗೂ ಹೆಚ್ಚು ಜನ ಸರಿ ಎಂದು ವಿಕೃತತೆ ಅನುಭವಿಸಿದ್ದಾರೆ.

ಅಂದರೆ ಸಜ್ಜನರು ಮೌನವಾಗಿದ್ದರೆ ದುರ್ಜನರು ಜೋರಾಗಿಯೇ ಸದ್ದು ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಥಿತಿಯವರು ವೋಟ್ ಮಾಡಿ ಮುಂದೆ ಹೋಗಿದ್ದಾರೆ. ಅಲ್ಲಿ ಬಲಪಂಥೀಯರೊಡನೆ ಕಮೆಂಟ್ ಮಾಡುವುದಕ್ಕೆ ಇಳಿದಿಲ್ಲ. ಇದರಿಂದ ಪ್ರಯೋಜನ ಸಹ ಇಲ್ಲ ಅನ್ನಿಸಿರಬೇಕು. ಇನ್ನು ಕೆಲವರಿಗೆ ಅಷ್ಟು ಸಮಯವಿರಲ್ಲಿಕ್ಕಿಲ್ಲ. ಆದರೆ ಅಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿರುವ ಅರ್ಧಕ್ಕಿಂತ ಹೆಚ್ಚು ಫೇಕ್ ಅಕೌಂಟ್‍ಗಳೆ ಆಗಿವೆ. ಉಳಿದವರ ಕೆಲಸ ಸಹ ಸದಾ ಫೇಸ್ ಬುಕ್ ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು, ಈ ರೀತಿ ಕೆಟ್ಟದಾಗಿ ಕಮೆಂಟ್ ಮಾಡುವುದೇ ಆಗಿದೆ.

ಒಟ್ಟಿನಲ್ಲಿ ಸಾಮಾಜಿಕ ಬದಲಾವಣೆ ಬಯಸುವವರಿಗೆ ಈ ಪೋಲ್ ಹೊಸದಾಗಿ ಜನಪರವಾಗಿ, ಜೀವಪರವಾಗಿ ಏನನ್ನಾದರೂ ಮಾಡುವುದಾದರೆ ಇನ್ನು ಇರುವ ಅವಕಾಶವನ್ನು ತೋರಿಸುತ್ತದೆ. ಜೊತೆಗೇನೆ ಜನರ ಮನಸ್ಥಿತಿ ನಿಧಾನವಾಗಿ ವಿಷಮಯವಾಗುತ್ತಿರುವುದನ್ನು, ಕೆಲವರು ಈಗಾಗಲೇ ವಿಕೃತರಾಗಿರುವುದನ್ನು ತೋರಿಸುತ್ತಲೇ ಎಚ್ಚರಿಕೆ ನೀಡುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here