ಚುನಾವಣೆಯಲ್ಲಿ ಮಿತಿಗಿಂತ ಹೆಚ್ಚು ವೆಚ್ಚ: ಸನ್ನಿ ಡಿಯೋಲ್ ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

| ನಾನಗೌರಿ ಡೆಸ್ಕ್ |

ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಗದಿಗಿಂತ ಹೆಚ್ಚು ಖರ್ಚು ಮಾಡಿದ ಆರೋಪದ ಮೇಲೆ ನಟ ಕಂ ಹಾಲಿ ಬಿಜೆಪಿ ಸಂಸದ ಸನ್ನಿ ಡಿಯೋಲ್ ಗೆ ಚುನಾವಣಾ ಆಯೋಗ ವಿವರ ಕೇಳಿ ನೋಟಿಸ್ ನೀಡಿದೆ. ಜೂನ್ 23 ರೊಳಗೆ ಉತ್ತರಿಸುವಂತೆ ಸಹ ತಿಳಿಸಿದೆ ಎಂದು ಪಿಟಿಐ ಉಲ್ಲೇಖಿಸಿದೆ.

ಪಂಜಾಬ್‍ನ ಗುರುದಾಸ್‍ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸನ್ನಿ ಡಿಯೋಲ್ ರವರು ಒಟ್ಟು 86 ಲಕ್ಷ ಚುನಾವಣಾ ವೆಚ್ಚದ ಲೆಕ್ಕ ನೀಡಿದ್ದಾರೆ. ಆದರೆ ಚುನಾವಣಾ ಆಯೋಗವೂ ಗರಿಷ್ಠ 70 ಲಕ್ಷದ ಮಿತಿಯನ್ನು ಹೇರಿತ್ತು. 16 ಲಕ್ಷ ಹೆಚ್ಚು ಖರ್ಚು ಮಾಡಿರುವುದು ಮೇಲ್ನೊಟಕ್ಕೆ ಕಂಡುಬಂದಿದ್ದು ನಿಯಮ ಉಲ್ಲಂಘಿಸಿದ್ದಾರೆ ಎಂದು ನೋಟಿಸ್ ನೀಡಿದೆ.

ಒಂದು ವೇಳೆ ಚುನಾವಣಾ ಆಯೋಗ ಗಂಭೀರ ಕೈಗೊಂಡಿದ್ದೇ ಆದಲ್ಲಿ ಈ ಅಪರಾಧಕ್ಕಾಗಿ ಸನ್ನಿ ಡಿಯೋಲ್ ರವರು ತಮ್ಮ ಸಂಸದ ಸ್ಥಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಈ ಕುರಿತು ಗುರುದಾಸ್‍ಪುರದ ಚುನಾವನಾಧಿಕಾರಿಯಾಗಿದ್ದ ಹಾಲಿ ಜಿಲ್ಲಾಧಿಕಾರಿ ವಿಪುಲ್ ಉಜ್ವಲ್ ಸೂಚನೆ ನೀಡಿದ್ದಾರೆ. ಸನ್ನಿ ಡಿಯೋಲ್ ಫ್ಯಾನ್ಸ್ ಫೇಸ್ ಬುಕ್ ಪುಟದಿಂದ 1.74 ಲಕ್ಷ ಹಣ ಖರ್ಚಾಗಿದೆ. ಇದೆಲ್ಲವಕ್ಕೂ ಇವರು ಸರಿಯಾಗಿ ಲೆಕ್ಕ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಡಿಯೋಲ್‍ರವರು ಪಂಜಾಬ್‍ನ ಗುರುದಾಸ್‍ಪುರದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಸುನೀಲ್ ಝಾಕರ್‍ರವರ ವಿರುದ್ಧ 82,459 ಮತಗಳ ಅಂತರದಿಂದ ಜಯಗಳಿಸಿದ್ದರು. ಒಂದು ವೇಳೆ ಚುನಾವಣಾ ಆಯೋಗ ಸದರ ಪ್ರಮಾದಕ್ಕಾಗಿ ಇವರ ಸಂಸತ್ ಸದಸ್ಯತ್ವನ್ನು ಅಮಾನತ್ತಿನಲ್ಲಿಡುವುದು ಅಥವಾ ರದ್ದುಗೊಳಿಸಿದರೆ ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು ವಿಜೇತರೆಂದು ಘೋಷಿಸುವ ಹಕ್ಕನ್ನು ಸಹ ಚುನಾವನಾ ಆಯೋಗ ಹೊಂದಿದೆ ಎಂದು ಇಂಡಿಯಾ ಟುಡೆ ಉಲ್ಲೇಖಿಸಿದೆ.

ಗುರುದಾಸ್‍ಪುರ ಕ್ಷೇತ್ರವನ್ನು ಈ ಹಿಂದೆ ಬಾಲಿವುಡ್ ನಟ ವಿನೋದ್ ಖನ್ನಾರವರು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಅವರು ನಿಧನದ ನಂತರ ಸನ್ನಿ ಡಿಯೋಲ್ ಅಲ್ಲಿಂದ ಆಯ್ಕೆಯಾಗಿದ್ದಾರೆ. ನಿನ್ನೆ ತಾನೇ ಅವರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here