Homeನಿಜವೋ ಸುಳ್ಳೋಗೋರಕ್ಷಣೆಯ ಹೊಸ ಆಯಾಮ: ಇಬ್ಬರು ಫೇಸ್‍ಬುಕ್ ಪಾಪಿಗಳು ಅಂದರ್!

ಗೋರಕ್ಷಣೆಯ ಹೊಸ ಆಯಾಮ: ಇಬ್ಬರು ಫೇಸ್‍ಬುಕ್ ಪಾಪಿಗಳು ಅಂದರ್!

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದ ಆತ್ಮಹತ್ಯೆಯ ಪ್ರಕರಣವನ್ನು ‘ಗೋರಕ್ಷಕನ ಕೊಲೆ’ ಎಂದು ಸಂಸದೆ ಹಬ್ಬಿಸುವ ಹೊತ್ತಿನಲ್ಲೇ ಬೆಳಗಾವಿ ಜಿಲ್ಲೆಯ ಪೊಲೀಸರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ಅರುಣ್ ಬಸರಗಿ(31) ಮತ್ತು ಫಕೀರಪ್ಪ ತಳವಾರ(28) ಎಂಬ ಇಬ್ಬರು ಲಫಂಗರನ್ನು ಅರೆಸ್ಟ್ ಮಾಡಿದ್ದರು. ಸುದ್ದಿ ಗೊತ್ತಾದ ಮೇಲೂ ಶೋಭಾ ಕರಂದ್ಲಾಜೆ ಟ್ವೀಟ್ ಡಿಲೀಟ್ ಮಾಡಲಿಲ್ಲ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಹೊಸ ಸರ್ಕಾರ ಬಂದ ಮೇಲೆ ಹಿಂದೆಲ್ಲ ತಮ್ಮನ್ನು ತಾವೇ ಕಂಟ್ರೋಲ್ ಮಾಡಿಕೊಂಡಿದ್ದ ಪುಂಡರೆಲ್ಲ ಮತ್ತೆ ಬಾಲ ಬಿಚ್ಚಲು ಶುರು ಮಾಡಿದ್ದಾರೆ. ಜೈ ಹಿಂದ್ ಹೇಳುವಂತೆ ಒತ್ತಾಯಿಸಿ ಉಪವಾಸದಲ್ಲಿದ್ದ ಮುಸ್ಲಿಂ ಯುವಕನನ್ನು ಥಳಿಸಿದ್ದು ಸೇರಿದಂತೆ ದಲಿತರ ಮೇಲೆ ಅಲ್ಲಲ್ಲಿ ಹಲ್ಲೆ ನಡೆದ ವರದಿಗಳೂ ಬಂದಿವೆ. ಇನ್ನೊಂದು ಕಡೆ ಫೇಸ್‍ಬುಕ್ ಪಾಪಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸದಲ್ಲಿ ಹಿಂದಿಗಿಂತ ಜೋರಾಗಿದ್ದಾರೆ. ಅಂತಹ ಇಬ್ಬರು ಫೇಸ್‍ಬುಕ್ ಪಾಪಿಗಳನ್ನು ಈಗ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆ ಕುರಿತ ತನಿಖೆ ಶುರು ಆಗುವ ಮೊದಲೇ ಇಬ್ಬರು ಫೇಸ್‍ಬುಕ್ ಪಾಪಿಗಳು, ‘ಗೋವುಗಳನ್ನು ರಕ್ಷಣೆ ಮಾಡಲು ಹೋದ ಯುವಕನನ್ನು ಹೊಡೆದು ಕೊಂದು ಹಾಕಿ ನೇಣಿಗೇರಿಸಲಾಗಿದೆ’ ಎಂದೆಲ್ಲ ಫೇಸ್‍ಬುಕ್ ಪೋಸ್ಟ್ ಮಾಡಿದರು. ಅದನ್ನು ವ್ಯಾಟ್ಸಾಪ್‍ನಲ್ಲೂ ಹರಿಬಿಟ್ಟರು.

ಈ ಯುವಕರಿಗಿಂತ ಭಯಂಕರ ಕೆಡುಕು ಬುದ್ಧಿಯ ಸಂಸದೆ ಶೋಭಾ ಕರಂದ್ಲಾಜೆ ಇದೇ ಸತ್ಯ ಎಂಬಂತೆ ಟ್ವೀಟ್ ಮಾಡಿ, ಮುಖ್ಯಮಂತ್ರಿಗಳು ಕೂಡಲೇ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂಸದೆಯ ಅಭಿಮಾನಿಗಳು ಸ್ವಲ್ಪ ಸಮಯದಲ್ಲೇ ಇದನ್ನು 3000ಕ್ಕೂ ಹೆಚ್ಚು ಲೈಕ್ ಮಾಡಿ, 2200ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಿದರಲ್ಲದೇ, ಯಡಿಯೂರಪ್ಪ, ಅರವಿಂದ ಲಿಂಬಾವಳಿ ಮತ್ತು ಪಿ.ಸಿ. ಮೋಹನ್ ಮುಂತಾದವರ ಗಮನಕ್ಕೂ ತಂದರು.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದ ಆತ್ಮಹತ್ಯೆಯ ಪ್ರಕರಣವನ್ನು ‘ಗೋರಕ್ಷಕನ ಕೊಲೆ’ ಎಂದು ಸಂಸದೆ ಹಬ್ಬಿಸುವ ಹೊತ್ತಿನಲ್ಲೇ ಬೆಳಗಾವಿ ಜಿಲ್ಲೆಯ ಪೊಲೀಸರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ಅರುಣ್ ಬಸರಗಿ(31) ಮತ್ತು ಫಕೀರಪ್ಪ ತಳವಾರ(28) ಎಂಬ ಇಬ್ಬರು ಲಫಂಗರನ್ನು ಅರೆಸ್ಟ್ ಮಾಡಿದ್ದರು. ಸುದ್ದಿ ಗೊತ್ತಾದ ಮೇಲೂ ಶೋಭಾ ಕರಂದ್ಲಾಜೆ ಟ್ವೀಟ್ ಡಿಲೀಟ್ ಮಾಡಲಿಲ್ಲ.

ಇದಿಷ್ಟೂ ನಿನ್ನೆ ರವಿವಾರ ನಡೆದಿದ್ದು. ಬೆಳಗಾವಿಯ ಎsಸ್‍ಪಿ ಖುದ್ದು ಹೇಳಿಕೆ ನೀಡಿ, ಇದು ಆತ್ಮಹತ್ಯೆ ಅಥವಾ ಅಸಹಜ ಸಾವು ಎಂದು ಸಿಆರ್‍ಪಿಸಿ ಕಲಂ 174ರ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವ ವೇಳೆ ಸುಳ್ ಸುದ್ದಿ ಹಬ್ಬಿಸಿದ್ದ ಇಬ್ಬರನ್ನು ಪತ್ತೆ ಮಾಡಿ ಜೈಲಿಗೆ ಹಾಕಿದ್ದೇವೆ’ ಎಂದು ಹೇಳಿಕೆ ನೀಡಿದ ನಂತರವೂ ಜವಾಬ್ದಾರಿ ಸ್ಥಾನದಲ್ಲಿರುವ ಸಂಸದೆ ಶೋಭಾ ಆ ಹುಡುಗರು ಹರಡಿದ ಸುಳ್ಳನ್ನೇ ಇನ್ನಷ್ಟು ಹಬ್ಬಿಸಿ ಸಮಾಹದ ಶಾಂತಿ ಕದಡಲು ಯತ್ನಿಸಿದ್ದಾರೆ.

ಕೂಡಲೇ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಅರಣ್ ಬಸರಗಿ ಮತ್ತು ಫಲೀರಪ್ಪ ತಳವಾರ ಮೇಲೆ ಹೂಡಲಾದ ಸಿಆರ್‍ಪಿಸಿ 153 ಎ ಕಲಂ ಅನ್ನು ಶೋಭಾ ಕರಂದ್ಲಾಜೆಯ ನೇಲೂ ಹೂಡಬೇಕು. ಹಾಗಾದಾಗ ಮಾತ್ರ ಇಂತಹ ಸಮಾಜ ಒಡೆಯುವ ಕೆಲಸ ನಿಲ್ಲಿಸಬಹುದು.

ರವಿವಾರ ಶಿವು ಉಪ್ಪಾರ (19) ಎನ್ನುವ ಯುವಕನ ಶವ ಬಾಗೇವಾಡಿ ಬಸ್ ನಿಲ್ದಾಣದ ಸಮೀಪ ನೇಣು ಹಾಕಿದ ಸ್ಥಿಯಲ್ಲಿತ್ತು. ಆತನ ತಂದೆಯ ದೂರು ಆಧರಿಸಿ ಗೋಕಾಕ್ ಪೊಲೀಸರು ಆತ್ಮಹತ್ಯೆ ಅಥವಾ ಅಸಹಜ ಸಾವು ಎಂದು 174 ಕಲಂ ಅಡಿ ತನಿಖೆ ಶುರು ಮಾಡಿದ್ದರು. ಆದರೆ ಮೇಲೆ ತಿಳಿಸಿದ ಇಬ್ಬರು ಫೇಸ್‍ಬುಕ್ ಪುಂಡರು, ಗೋ ಸಾಗಾಟ ಮಾಡುತ್ತಿದ್ದವರನ್ನು ತಡೆಯಲು ಯತ್ನಿಸಿದಾಗ ಶಿವು ಅವರನ್ನು ಥಳಿಸಿ ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದೆಲ್ಲ ಸುಳ್ಳು ಸುದ್ದಿ ಹರಡಿದ್ದರು.

ಗೋಕಾಕಿನ ಶಾಸಕ ರಮೇಶ ಜಾರಕಿಹೊಳಿಗಂತೂ ಇದರ ಅರಿವು ಇರುವುದೇ ಡೌಟು. ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯಾದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಶೋಭಾ ಕರಂದ್ಲಾಜೆ ವಿರುದ್ದಧ ಕೇಸು ದಾಖಲಾಗುವಂತೆ ಮಾಡಬೇಕಿದೆ. ಇಲ್ಲವಾದರೆ, ಸಮಾಜ ಒಡೆಯುವ ಶಕ್ತಿಗಳ ಅಟ್ಟಹಾಸ ಇನ್ನಷ್ಟು ಜೋರಾಗಲಿದೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...